ಅವಳ ಕೈ
ಅವಳ ಕೈ ಹಿಡಿದ ಕ್ಷಣ
ಮೂಡಿತು ನನ್ನಲ್ಲಿ
ಎಂದೂ ಭಾವಿಸದ ಜಾಗೃತಿ
ಈವರೆಗೆ ಕೇಳ್ಪಟ್ಟಿದ್ದು
ಬಾಬಾ ಯೋಗಿಯರ ಪ್ರವಚನದಿ
ಅರಿತೆ ನಾ
ಪ್ರತಿ ಕ್ಷಣದ ಪೂರ್ಣತೆಯನು
ಕೋರಲಿಲ್ಲ ಆ ವೇಳೆ
ಬೇರೆ ಇನ್ನೇನನ್ನು
ತುಸು ಗಳಿಗೆ
ಆ ಸ್ವರ್ಗದ ದ್ವಾರಕ್ಕೆ
ಬೀಗ ಹಾಕಿದ
ನಮ್ಮಿಬ್ಬರ ಕೈ ಬೆರಳುಗಳು
ಎನ್ನ ಕಣಕಣವೂ ಹಾತೊರೆಯಿತು
ಆ ಜೀವವನು ಧ್ಯಾನಿಸಲು
ನಿನ್ನೆ ಇಲ್ಲ ನಾಳೆ ಇಲ್ಲ
ಈಗವೇ ಎಲ್ಲ
ಸ್ಥಗಿತಗೊಂಡಿತು ಸಮಯ
ಕಾಡಲಿಲ್ಲ ಎನ್ನನು
ಕೈಯ್ಯ ಬಿಟ್ಟ ಮೇಲೆ
ಆ ಸುಮಧುರ ನೆನಪು
ಇರಲಾರದು ನೆನಪಿನಲಿ ಮಾಧುರ್ಯ
ಇರ ಕೂಡದು
ಅದಿರುವುದು ಆ ಕ್ಷಣದಿ ಮಾತ್ರ
ಸಾಯುವುದು ಆ ಕ್ಷಣದೊಂದಿಗೆ
ಅಲೆದಾಡದಿರು ನೆನಪಿನ ಸ್ಮಶಾನದಿ ತಮ್ಮ !
ಸ್ವರ್ಗವೇ ಇರಲಿ ನರಕವೇ ಇರಲಿ
ಸಾಯಲಿ ಅದೇ ಕ್ಷಣ
~ಅ
When I held her hand
befell on me
an awareness unknown
hitherto heard of
in the sermons of saints and monks
I witnessed
the completeness of every moment
seek did I not then
anything else
For a while
the doors of heaven were locked
by our fingers
every ounce of me
sought to contemplate that being
there was no yesterday nor tomorrow
time reaching a standstill
tormented was I not
when I left her hand
by those sweet memories
sweetness dwells not in memory
it ought not to
it lives in the moment
and dies with it
wander not in the graveyard of memories, dear brother !
Be it heaven or hell
let it die the very moment
~ a
