ಸಿಗರೇಟು
ಮನುಜನೊಬ್ಬ ಖೈದಿ, ಸಂಬಂಧಗಳ
ವರ್ತೆನೆ ಅವರಿವರ
ಒಗಟು ಅವನಸ್ತಿತ್ವದ
ಪೂರ್ಣತೆಯ ಹುಡುಕಿ
ಇತರರ ಸಂಗಡದಿ
ಸಿಗದಾಗ ಹಚ್ಚಿದ
ಸಿಗರೇಟಿನ ದೀಪವ
ಉರಿವುದೇ ನಾನೆಂಬ ಬೀಡಿ
ವಿನಾ ಮನ್ನಣೆಯ ಬೆಂಕಿ ?
ಪೊಗೆಯ ದೀರ್ಘ ಶ್ವಾಸದಿ
ಸಿಕ್ಕಿತೇ ಆವನಿಗೆ ನೆಮ್ಮದಿ ?
ಸೋತು ಕೂತನು
ನುಗ್ಗಲಾಗದೆಂದು
ಗುಂಪುಗಳ ಚಕ್ರವ್ಯೂಹ
ಬಿಟ್ಟನು ಪೊಗೆಯ
ನಿಟ್ಟುಸಿರ
ಸಂಬಂಧಗಳ ಹುಡುಕಾಟ
ಅದರಿಂದಲೇ ಪೀಡಿತ
ಇತರರಲ್ಲಿ ನೆಲೆ ಕಾಣುವ
ಸೋತ ಮನುಜ
ಕೂತ ಬಿಡಲು
ಪೊಗೆಯ
ನಿಟ್ಟುಸಿರ
~ ಅ
man, the prisoner of relationships
their moody gestures
the riddle of his existence
seeks completeness
in others
failing at which he lights
the lamp called cigarette
Would the cigarette ‘I’ burn
without the fire of validation ?
in the deep breath of smoke
did he find relief ?
sat distraught he
unable to breakthrough
the cakravyuha of groups
heaved a distressed sigh
of smoke
in search of relationships,
and tormented by the same
seeking abode in others
shattered man
heaved a distressed sigh
of smoke
~ a
