ಹುಡುಕಾಟ
ಎಂದೂ ಮುಗಿಯದ ಹುಡುಕಾಟ
ಬಯಸಿದ್ಧನ್ನ ಗ್ರಹಿಸಲಾಗದ ಕೋಲಾಹಲ
ಎನಗೆ ತಿಳಿದಿದೆ ಎಂಬ ಮಿಥ್ಯೆಯ ಕೊಸರಾಟ
ಎಂದೂ ಮುಗಿಯದ ಹುಡುಕಾಟ
ಅಕ್ಕರೆಯ ಸ್ಪರ್ಶ ನನ್ನವನೆಂಬ ನೋಟ
ನನ್ನಿರುವಿಕೆಯ ಲಾಂಛನ-
ನನ್ನ ಕಲ್ಪನೆಯ ಖೈದಿ
ಬಿಡುಗಡೆಯ ಕಾಯುತ್ತ
ಎಂದೂ ಮುಗಿಯದ ಹುಡುಕಾಟ
ಒಳಗಿನ ಈ ಪರದಾಟ
ಕಾಡುವ ಅಪೂರ್ಣತೆಯ ರಾಗ
ಸ್ಥಿರವಾದ ತೀರವ ಕೋರುತ್ತಾ
ಎಂದೂ ಮುಗಿಯದ ಹುಡುಕಾಟ
~ಅ
the never ending search….
the turmoil of the sheer inability to grasp the desired
the haggle with the illusion of knowing it..
the never ending search…
an affectionate touch, a glance of belongingness
marking my existence,
but a prisoner of my imagination
seeking release…
the never ending search…
the inner turmoil,
the stinging rhythm of incompleteness,
in search of a stable abode…
the never ending search ….
~a
